Manoj testing

ಬನ್ನಿ ಸನಾತನ ಹಿಂದೂ, ಭಾರತೀಯ ಸಂಸ್ಕೃತಿ,ಈ ಭೂಮಿ, ಜ್ಯೋತಿಷ್ಯ ಶಾಸ್ತ್ರದ, ಭೂಗೋಳ ದ ಬಗ್ಗೆ ತಿಳಿಯೋಣ,ಇಂದೂಕೂಡಾ ‘ಭೂಮಿ ಚಪ್ಪಟೆ ಆಗಿದೆ’ ಮತ್ತು ‘ಸೂರ್ಯನೆ ಭೂಮಿಯ ಸುತ್ತ ತಿರುಗುತ್ತಾನೆ’ ಅಂತ ನಂಬುವ/ಭೋಧಿಸುವ ಪುಸ್ತಕ ಮತ್ತು ಜನರಿದ್ದಾರೆ,                                       

   🌹ಆದರೇ ನಮ್ಮ ಪೂರ್ವಜರು ಅನಾದಿಕಾಲದಿಂದ ಭೂಮಿಯನ್ನ ‘ ಭೂಗೋಳ ‘ ಅಂತ ಕರೆದಿದ್ದಾರೆ. 

ಭೂ = ಭೂಮಿ & ಗೋಳ = ಗೋಲಾಕಾರ. 

🌹ಕೇವಲ ಭೂಮಿಯಲ್ಲ, ನಮ್ಮ ಸುತ್ತಲೂ ಇರುವ ಈ ವಿಶ್ವವನ್ನ ‘ ಖಗೋಲ ‘ ಅಂತ ಕರೆದಿದ್ದಾರೆ. 

ಖ= ವಿಶ್ವ & ಗೋಲ = ಗೋಲಾಕಾರ

ಈ ವಿಶ್ವ ಅನಂತ, ಆದರೆ ಅದು ನಮ್ಮ ಸುತ್ತಲೂ ಇರುವುದರಿಂದ 360 ಡಿಗ್ರಿಯಲ್ಲಿ ಕಾಣಸಿಗುತ್ತದೆ. 

🌹ಈ ರೀತಿ ಸುತ್ತಲೂ ಇರವ ಅಂದರೇ ನಮ್ಮ 360 ಡಿಗ್ರಿಯಲ್ಲಿ ವ್ಯಾಪಿಸಿರುವ ಈ ಖಗೋಲವನ್ನ (ಬ್ರಹ್ಮಾಂಡವನ್ನ) 30 ಡಿಗ್ರಿಯಂತೆ ವಿಭಜಿಸಿದರೆ 12 ಭಾಗಗಳಾಗುತ್ತವೆ. ಈ 12 ಭಾಗಗಳಿಗೆ ‘ ರಾಶಿಗಳು ‘ ಅಂತ ಹೆಸರಿಟ್ಟರು. 

ಅವೇ ನಮ್ಮ ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕಾ, ಧನು, ಮಕರ, ಕುಂಭ, ಮತ್ತು ಮೀನ ರಾಶಿಗಳು.

🌹ಅದೇ ರೀತಿ 360 ಡಿಗ್ರಿಯನ್ನ 13.20 ಡಿಗ್ರಿಯಂತೆ ವಿಭಜಿಸಿದರೆ 27 ಭಾಗಗಳಾಗುತ್ತವೆ. 

ಆ 27 ಭಾಗಗಳನ್ನೆ ‘ ನಕ್ಷತ್ರ ‘ ಅಂತ ಕರೀತಾರೆ. 

ಅವುಗಳೇ ನಮ್ಮ ಅಶ್ವಿನಿ, ಭರಣಿ, ಕೃತ್ತಿಕಾ, ರೋಹಿಣಿ, ಮೃಗಶಿರಾ, ಆರ್ದ್ರಾ, ಪುನರ್ವಸು,ಪುಶ್ಯ,ಆಶ್ಲೇಷ,ಮಾಘ,ಪೂರ್ವ ಫಾಲ್ಘುಣಿ, ಉತ್ತರ ಫಾಲ್ಘುಣಿ, ಹಸ್ತಾ,ಚಿತ್ರಾ,ಸ್ವಾತಿ,ವೈಶಾಖ,ಅನುರಾಧಾ,ಜೇಷ್ಠ, ಮೂಲಾ,ಪೂರ್ವ ಆಷಾಡಾ, ಉತ್ತರಆಷಾಡಾ, ಶ್ರಾವಣ, ಧನಿಷ್ಠ, ಶತಾಭಿಷಖ,ಪೂರ್ವ ಭಾದ್ರಪದ, ಉತ್ತರ ಭಾದ್ರಪದ, ಮತ್ತು ರೇವತಿ.

🌹 ನಾವು ಹುಟ್ಟಿದ ಸಮಯದಲ್ಲಿ ಚಂದ್ರ ಮತ್ತು ಸೂರ್ಯ ಯಾವ ಡಿಗ್ರಿಯಲ್ಲಿ ಇರುತ್ತಾರೋ ಅದನ್ನ ಆದರಿಸಿ ನಮ್ಮ ರಾಶಿ ಮತ್ತು ನಕ್ಷತ್ರವನ್ನ ಗುರುತಿಸಲಾಗುತ್ತದೆ. 

🌹ನಕ್ಷತ್ರ ಮತ್ತು ಸೂರ್ಯನ ಸ್ಥಾನ ಹಾಗೂ ಗ್ರಹಗಳ ಮತ್ತು ಚಂದ್ರನ ಚಲನೆಯ ಆಧಾರದ ಮೇಲೆ ನಿರ್ದಿಷ್ಟ ಸಮಯವನ್ನ ಕಂಡುಕೊಳ್ಳುವ ಹಾಗೂ ಖಗೋಲದ ಬಗ್ಗೆ ಅಧ್ಯಯನ ಮಾಡುವುದನ್ನೇ ‘ ಜ್ಯೋತಿಷ್ಯ ಶಾಸ್ತ್ರ ಅನ್ನುತ್ತಾರೆ,           ಕೈ ರೇಖೆ ನೋಡಿ ಭವಿಷ್ಯ ಹೇಳೋದನ್ನಲ್ಲ,

🌹ಚಂದ್ರನ ಚಲನೆ ಆದಾರದ ಮೇಲೆ ಪ್ರತಿಯೊಂದು ನಕ್ಷತ್ರವನ್ನ (ಡಿಗ್ರಿ) ಮತ್ತೆ ನಾಲ್ಕು ಭಾಗಗಳಾಗಿ ವಿಂಗಡಿಸಿದಾಗ 108 ಸಂಖ್ಯೆ ಬರುತ್ತದೆ. ಈ 108 ಸಂಖ್ಯೆ ಶುಭ ಅಂತ ಬಹಳ ಜನ ನಂಬುತ್ತಾರೆ. 

🌹ಈ 108 ಭಾಗಗಳನ್ನ ಮತ್ತೆ ಒಂಬತ್ತರಂತೆ  ವಿಭಜಿಸಿದಾಗ 12 ಭಾಗಗಳಾಗುತ್ತವೆ. 

ಅದೇ 12  ಭಾಗಗಳೇ ನಮ್ಮ 12 ತಿಂಗಳುಗಳು. 

🌹ಈ ತಿಂಗಳುಗಳ ಹೆಸರನ್ನ ನಕ್ಷತ್ರದ ಆದಾರದ ಮೇಲೆ ಇಡಲಾಗಿದೆ. 

ಅಂದರೆ ಯಾವ ಡಿಗ್ರಿಯಲ್ಲಿ ಅಂದರೇ ಯಾವ ನಕ್ಷತ್ರದ  ಹತ್ತಿರ ಚಂದ್ರನು ಬೆಳೆಯುತ್ತಾ ಹೋಗಿ ಪೂರ್ತಿ ಚಂದ್ರನಾಗುವಣೋ (ಹುಣ್ಣಿಮೆ), ಆ ನಕ್ಷತ್ರದ ಹೆಸರನ್ನ ಆ ತಿಂಗಳಿಗೆ ಇಡಲಾಗಿದೆ. 

(ನಕ್ಷತ್ರ ಅಂದರೆ ಡಿಗ್ರಿ, ನೆನಪಿರಲಿ)

ಉದಾಹರಣೆಗೆ, ಚಂದ್ರನು ‘ಚಿತ್ರ’ ನಕ್ಷತ್ರದ ಹತ್ತಿರ ಕಂಡು ಬರುವ ಸಮಯವನ್ನ ಚೈತ್ರ ಮಾಸ ಅಥವಾ ಚೈತ್ರ ತಿಂಗಳು ಅಂತ ಕರೆದರು.

ಮುಂದೆ, ಚಂದ್ರನು ‘ವಿಶಾಕ’ ನಕ್ಷತ್ರದ ಹತ್ತಿರ ಕಾಣಿಸುವುದರಿಂದ ವೈಶಾಕ ಮಾಸ/ತಿಂಗಳು.

ಹೀಗೇ ಮುಂದಿನ ತಿಂಗಳುಗಳನ್ನ 

ಜೇಷ್ಠಾ ನಕ್ಷತ್ರ (ಜೇಷ್ಠ ಮಾಸ) 

ಆಷಾಡ ನಕ್ಷತ್ರ (ಆಷಾಡ ಮಾಸ), 

ಶ್ರವಣ ನಕ್ಷತ್ರ (ಶ್ರಾವಣ ಮಾಸ), 

ಭಾದ್ರಪದ (ಭಾದ್ರಪದ ಮಾಸ), 

ಅಶ್ವಿನಿ ನಕ್ಷತ್ರ( ಆಶ್ವಿಣಿ ಮಾಸ) 

ಕೃತ್ತಿಕಾ ನಕ್ಷತ್ರ (ಕಾರ್ತೀಕ ಮಾಸ)

ಮೃಗಶಿರ ನಕ್ಷತ್ರ (ಮಾರ್ಗಶಿರ ಮಾಸ), 

ಪುಶ್ಯ ನಕ್ಷತ್ರ (ಪುಶ್ಯ ಮಾಸ)

ಮಾಘ ನಕ್ಷತ್ರ (ಮಾಘ ಮಾಸ)

ಫಾಲ್ಗುಣ ನಕ್ಷತ್ರ (ಫಾಲ್ಗುಣ ಮಾಸ) ಅಂತ ಹೆಸರಿಸಲಾಗಿದೆ. 

🌹NASA /ISRO ಸಂಸ್ಥೆಗಳು ಬಂದು ಇನ್ನೂ 100 ವರುಷಗಳೂ ಆಗಿಲ್ಲ. 

🌹ಆದರೇ ಅನಾದಿಕಾಲದಿಂದಲೂ  ನಮ್ಮ ಪೂರ್ವಜರು, 100% ಕರಾರುವಕ್ಕಾಗಿ ಹುಣ್ಣಿಮೆ, ಅಮವ್ಯಾಸೆ, ಗ್ರಹಣ, ಗ್ರಹಣದ ಸಮಯವನ್ನ ಹೇಳುತ್ತಾ ಬಂದಿದ್ದಾರೆ ಮತ್ತು ಈಗಲೂ ಹೇಳುತ್ತಾರೆ. 

🌹ಇದು ನಮ್ಮ ಪೂರ್ವಜರ ಜ್ಞಾನದ ತಾಕತ್ತು.

ಇದನ್ನೇ ಯುರೋಪಿಯನ್ನರು ಕಾಪಿ ಮಾಡಿದ್ದು.

🌹ಇಂತಹ ಮಹಾನ ಜ್ಞಾನವನ್ನ ಪ್ರಪಂಚದ ಮೊತ್ತಮೊದಲ ವಿಶ್ವವಿದ್ಯಾಲಯಗಳಾದ ತಕ್ಷಶಿಲಾ ಮತ್ತು ನಳಂದಾ ದಲ್ಲಿ ಭೋದಿಸಲಾಗುತ್ತಿತ್ತು. ಅಲ್ಲಿಗೆ ಪ್ರಪಂಚದ ಎಲ್ಲ ಕಡೆಯಿಂದ ವಿದ್ಯಾರ್ಥಿಗಳು ಬರುತ್ತಿದ್ದರು.

ತಮ್ಮ ಪುಸ್ತಕ ಇದ್ದಾಗ ಬೇರೇ ಪುಸ್ತಕಗಳ ಅವಶ್ಯಕತೆನೇ ಇಲ್ಲ ಅಂತ ಇಡೀ ವಿಶ್ವವಿದ್ಯಾಲಯಕ್ಕೆ, ಭಕ್ತಿಯಾರ್ ಖಿಲ್ಜಿ ಅನ್ನುವ ಮತಾಂದ ದರೋಡೆಕೋರ ಬೆಂಕಿ ಹಚ್ಚಿದ. ಅಲ್ಲಿ ಎಷ್ಟು ಪುಸ್ತಕಗಳಿದ್ದವು ಅಂದರೆ, ಮೂರು ತಿಂಗಳುಗಳ ಕಾಲ ಬೆಂಕಿ ಇತ್ತು ಅಂತ ಹೇಳುತ್ತಾರೆ. ಅಂದರೇ ಅದೆಷ್ಟು ಜ್ಞಾನ ಸಂಪತ್ತು ಸುಟ್ಟು ಹೋಯಿತೋ ಏನೋ. ಅದನ್ನ ಊಹಿಸುಲು ಅಸಾಧ್ಯ.

🌹ನಮ್ಮ ಇತಿಹಾಸ ಇಂತಹ ಹಲವಾರು ದುರ್ಘಟನೆಗಳಿಗೆ ಸಾಕ್ಷಿಯಾಗಿದೆ. ತಿಳಿದುಕೊಳ್ಳುವ ಘಟನೆ ಮತ್ತು ದುರ್ಘಟನೆಗಳು ಬಹಳಷ್ಟು ಇವೆ. ನಿಜವಾದ ಇತಿಹಾಸ ತಿಳಿದುಕೊಳ್ಳಬೇಕಾಗಿದೆ. 

ಕೊನೆಯದಾಗಿ, *ಇಂತಹ ಮಹಾನ ದೇಶದ, ಮಹಾ ಪರಂಪರೆಯ, ಜ್ಞಾನ ಭಂಡಾರದ, ಮಹಾನ್ ಸಂಸ್ಕೃತಿಯೊಂದಿಗೆ ನಮ್ಮನ್ನು ನಾವು ಗುರುತಿಸಿಕೊಳ್ಳಲು ಹೆಮ್ಮೆ ಪಡುತ್ತೇವೆ.

ಮಾಹಿತಿ ಸಂಗ್ರಹ, ಸನಾತನ ಹಿಂದೂ ಧಾರ್ಮಿಕ ಗ್ರಂಥದಿಂದ,:

***

27 ಜನ್ಮ ನಕ್ಷತ್ರಗಳ ಗುಣಲಕ್ಷಣ ಸಹಿತ ಸಂಪೂರ್ಣ ಮಾಹಿತಿ 

Leave a Reply

Your email address will not be published. Required fields are marked *